ಚತುರ್ಮುಖ ಜೈನ ಬಸದಿ ( Chaturmukha Jaina Basadi )

ನಾ ಈಗ ಪ್ರಯಾಣ ಹೊರಟಿರುವ ಸ್ಥಳದ ಇತಿಹಾಸದ ಬಗ್ಗೆ ನನಗೆ ಸ್ವಲ್ಪವೂ ಮಾಹಿತಿ ಇಲ್ಲ ,ನಿಜ ಹೇಳಬೇಕು ಎಂದರೆ ಇಂತಹ ಪ್ರವಾಸಿ ಸ್ಥಳ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೆ ಎಂದು ಗೊತ್ತೇ ಇರಲಿಲ್ಲ ನನಗೆ . ಹೀಗೆ ಒಂದು ದಿನ ಬೈಕ್ ಹತ್ತಿ ನಾವು ಶರಾವತಿ ತೂಗುಸೇತುವೆಯ ಕಡೆಗೆ ಹೊರಟೆವು .ನಂತರ ಅಲ್ಲಿಂದ ಮುಂದೆ ಒಂದು ಬಸದಿ ಇದೆ ,ತುಂಬಾ ಹಳೆ ಕಾಲದ ಬಸದಿ ಎನ್ನುವ ವಿಷಯ ನಮಗೆ ಗೊತ್ತಾಯ್ತು. ಹೀಗೆ ಶುರುವಾಗಿದ್ದ ಪ್ರಯಾಣ ಕೊನೆಗೆ …

ಕೋಸಳ್ಳಿ ಫಾಲ್ಸ್ (Kosalli Falls)

ನಾನು ಸಾಮಾನ್ಯವಾಗಿ ನನ್ನೆಲ್ಲ ಬೆಂಗಳೂರಿನ ಗೆಳೆಯರು ಮಾತನಾಡುವುದನ್ನ ಕೇಳಿದ್ದೇನೆ.ಅವರೇನಾದರೂ ಬೆಂಗಳೂರಿನಿಂದ ಈ ನಮ್ಮ ಮಲೆನಾಡು ಅಥವಾ ಕರಾವಳಿ ಭಾಗಕ್ಕೆ ಪ್ರಯಾಣ ಬೆಳೆಸುವದಾದರೆ ಮೊದಲನೆಯದಾಗಿ ಅವರು ಬೆಟ್ಟಿ ನೀಡುವ ಫಾಲ್ಸ್ ಎಂದರೆ ಜೋಗ ಫಾಲ್ಸ್ ಮತ್ತೆ ಸುಮಾರು ಬೀಚ್ ಗಳು ಅಷ್ಟೇ. ಜೋಗ ಫಾಲ್ಸ್ ನಮ್ಮ ಮಲೆನಾಡಿನ ಪ್ರವಾಸಿ ತಾಣದಲ್ಲಿ ಒಂದು..ಅದರಲ್ಲಿ ಯಾವುದೇ ಸಂದೇಹ ಇಲ್ಲ.ಆದರೆ ಜೊತೆಗೆ ಈ ಮಲೆನಾಡಿನ ಅರಣ್ಯಗಳಲ್ಲಿ ಅದೆಷ್ಟೋ ಹಳ್ಳಕೊಳ್ಳಗಳು ಝರಿ ಗಳು ಇವೆಯೆಂದರೆ ಒಂದೆರಡು ವಾರದಲ್ಲಿ ನೋಡಿ ಮುಗಿಸಲು ಅಸಾಧ್ಯ. ಅಂತದ್ದೇ ಒಂದು …

ವನ್ನಳ್ಳಿ ಬೀಚ್ (Vannalli Beach)

ಸೂರ್ಯದೇವ ತನ್ನ ಅಂದಿನ ಕಾರ್ಯಮುಗಿಸಿ ಪಡುವಣ ಶರಧಿಯಲ್ಲಿ ಮೀಯುವ ತವಕ ಎಂಬಂತೆ ಕಡಲಂಚಿಗೆ ಸಾಗಿದ್ದ .ರವಿಯ ಕೆಂಬಣ್ಣದ ಓಕುಳಿ ಬಾನಲ್ಲಿ ತುಂಬಿ ತನ್ನ ತೆಕ್ಕೆಗೆ ಬಂದ ಎಲ್ಲವನ್ನು ಕೆಂಪಾಗಿಸಿತ್ತು .ಪಕ್ಷಿಗಳೆಲ್ಲ ತಮ್ಮ ಮನೆ ಮಕ್ಕಳು ನೆನಪಾಗಿ ತಾಮುಂದೆ ತಾಮುಂದೆ ಎಂಬ ಪೈಪೋಟಿಗೆ ಇಳಿದಂತೆ ಬಾನಿಗೆ ಹಾರಹಾಕಿದಂತೆ ವೇಗವಾಗಿ ಹಾರುತ್ತಿದ್ದವು .ಇತ್ತ ಕಡಲರಾಜ ಸೂರ್ಯನ ಆಗಮನಕ್ಕೆ ಸರ್ವತಯಾರಿ ನಡೆಸಿದಂತಿತ್ತು . ಶರಧಿಯ ನೀರು ಕೆಂಪು ಹಳದಿ ಮಿಶ್ರಿತವಾಗಿ ತೆರೆ ನೊರೆಯಾಗಿ ಕುಣಿದು ಕುಪ್ಪಳಿಸಿ ದಡ ಸೇರಿ ಮರಳು ಬೆಳಕು …

ಜೀವನದಿ ಅಘನಾಶಿನಿ ( Aghanashini ) .

ಶಿರಸಿ ನಗರದ ಹೆಸರನ್ನು ಕೇಳದವರೇ ವಿರಳ . ಕರ್ನಾಟಕದ ಅತಿದೊಡ್ಡ ಜಾತ್ರೆಯಲ್ಲಿ ಶಿರಸಿಯ ಸಿರಿದೇವಿ ಮಾರಿಕಾಂಬೆಯ ಜಾತ್ರೆಯು ಒಂದು. ನಾನೀಗ ಹೇಳಹೊರಟಿರುವದು ಜಾತ್ರೆಯ ಬಗ್ಗೆ ಅಲ್ಲ.ಆದರೆ ಶಿರ್ಶಿ ನಗರದ ಶಂಕರ ಹೊಂಡವನ್ನ ತನ್ನ ತವರು ಮನೆಯಾಗಿ ಮಾಡಿಕೊಂಡ ನನ್ನೂರ ಜೀವನದಿ ಅಘನಾಶಿನಿಯ ಬಗ್ಗೆ. ಶಂಕರ ಹೊಂಡ ಎಂಬ ಕೆರೆಯಿಂದ ಉದ್ಭವವಾಗಿ ಹರಿಯುತ್ತ ತನ್ನೊಂದಿಗೆ ಸಣ್ಣ ಪುಟ್ಟ ಝರಿ ಹಳ್ಳಗಳೊಂದಿಗೆ ಮೈದುಂಭಿಕೊಳ್ಳುತ್ತ ಮಲೆನಾಡಿನ ಧಟ್ಟ ಅರಣ್ಯಗಳಲ್ಲಿ ಬಳಕುತ್ತಾ ಹೆಬ್ಬಂಡೆಗಳ ಮದ್ಯೆ ನೊರೆಕಾರಿ ಭೋಗರೆಯುತ್ತ ಸಾಗುವ ಈ ನದಿ ತನ್ನ …

ಗೋವಿಂದ ತೀರ್ಥ ,ಮೂಡ್ಲುಗಲ್ಲು ,ಹಾಲಾಡಿ ನದಿ ಸೋಮೇಶ್ವರ ಬೀಚ್ ಪ್ರಯಾಣದ ಅನುಭವ . (Govinda Teerta ,Mudlugallu ,Haladi River and Someshwara Beach travel experiance.)

ಇದು ಕೂಡ ಒಂತರ ಹಠಾತ್ತಾಗಿ  ಪ್ಲಾನ್ ಆಧ ಟ್ರಿಪ್ ಅಂತಾನೆ ಹೇಳಬಹುದು . ಪ್ಲಾನ್ ಆಗಿದ್ದು ಕೇವಲ ಗೋವಿಂದ ತೀರ್ಥ ಮತ್ತು ಹತ್ತಿರದ ದೇವಸ್ಥಾನಕ್ಕೆ ಹೋಗಿ ಬರುವುದು ಅಂತ . ಆ ದೇವಸ್ಥಾನದ ಸ್ಥಾನದ ಹೆಸರು ಕೂಡ ಅಲ್ಲಿಗೆ ಹೋಗುವವರಿಗೆ ಗೊತ್ತಿರಲಿಲ್ಲ ನನಗೆ.  ನಿಜ ಹೇಳಬೇಕೆಂದರೆ ನಮ್ಮ ಅಣ್ಣನಿಗೂ  ಆ ದೇವಸ್ಥಾನದ ಬಗ್ಗೆ ಗೊತ್ತಿರಲಿಲ್ಲ ಅಂದೆನಿಸುತ್ತದೆ . ಹತ್ತಿರದಲ್ಲಿರುವ ಅಣ್ಣನ ಸ್ನೇಹಿತ ನ್ನು  ಕರೆದುಕೊಂಡು ಅವನ ಸಲಹೆಯೊಂದಿಗೆ ಹೋಗೋಣ ಎನ್ನುವುದು ಅವನ ಉಪಾಯ. ಆದರೆ ಅಲ್ಲಿ ಹೋಗಿ …

ನಂದಿ ಬೆಟ್ಟ ( Nandi Hills )

 ನನ್ನ ಜೀವನದಲ್ಲಿ ನಾನು ಅನೇಕಾನೇಕ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಆದರೆ  ನಂದಿ ಬೆಟ್ಟದ ಬಗ್ಗೆ ಇರುವ ಕುತೂಹಲ ಅದರ ಬಗ್ಗೆ ಕೇಳಿರುವ ವರ್ಣನೆ ಈ ನನ್ನ ಪ್ರವಾಸವನ್ನು ಸಾರ್ಥಕ ಎನಿಸಿದೆ. ನೀವು ಬೆಂಗಳೂರಿನವರಾದರೆ ಇದು ನಿಮಗೆ ಸರ್ವೇ ಸಾಮಾನ್ಯ ಪ್ರವಾಸಿ ತಾಣದಲ್ಲೊಂದು ಅನಿಸಬಹುದು .ಆದರೆ ನನ್ನಂತ ದೂರದ ಎಲ್ಲಿಂದ ಲೋ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಮತ್ತು ನಂದಿ ಬೆಟ್ಟದ ವರ್ಣನೆಯನ್ನು ಓದಿ ಬೆಳೆದಿರುವವರಿಗೆ ಭೇಟಿ ನೀಡಿದಾಗ ಮೈ ರೋಮಾಂಚನ ಆಗುವುದು ನಿಜವಾಗಿಯೂ ಹೌದು. ಅದೊಂದು ದಿನ …

ಕರಿಕಾನಮ್ಮ ಬೆಟ್ಟ (Karikanamma Hill ) – One of the highest peak in the Honnavar -Kumta Taluk

ಕರಿಕಾನಮ್ಮ ಬೆಟ್ಟ… ಈ ಪವಿತ್ರ ಸ್ಥಳ ಇರುವುದು ಈಗ ನಾನಿರುವ ಕುಮಟಾದಿಂದ ಕೇವಲ ಮೂವತ್ತು ಕಿಲೋಮೀಟರ್ ದೂರದಲ್ಲಿ. . ಆದರೆ ಹತ್ತಿರದಲ್ಲಿ ಹುಟ್ಟಿ ಬೆಳೆದಿರುವ ನನಗೆ ಈ ಸ್ಥಳದ ಮಹತ್ವ ತಿಳಿದದ್ದು ಅಲ್ಲಿ ಬೇಟಿ ನೀಡಿದಾಗ. ಅದಕ್ಕೂ ಮೊದಲೇ ಸ್ಥಳದ ಮಹಿಮೆಯನ್ನು ಬೇರೆಯವರಿಂದ ಕೇಳಿ ತಿಳಿದಿದ್ದೆ ಅಷ್ಟೇ. ಶನಿವಾರ ಬೆಳಿಗ್ಗೆ ಸ್ನೇಹಿತರ ಜೊತೆಗೂಡಿ ಪ್ರಯಾಣ ಆರಂಭಿಸಿದೆ ,ಆದರೆ ತುಂಬಾ ತಡವಾಗಿ .ನೀವೇನಾದರೂ ನಿಸರ್ಗ ಪ್ರಿಯರಾದರೆ ಪ್ರಕೃತಿ ಮಾತೆಯ ರಮಣೀಯ ಸೌಂದರ್ಯವನ್ನು ವೀಕ್ಷಿಸ ಬೇಕೆನ್ನುವ ಆಸೆ ನಿಮಗಿದ್ದರೆ ನಸುಕಿನ …

ಗೋಕರ್ಣ ( Gokarna ) – One of the best place to visit.

ಸೆಪ್ಟೆಂಬರ್ 15, 2018, ಆಗ ನಾನು ನನ್ನೂರಿನಲ್ಲಿ ಇದ್ದೆ. ನಾನು ಕೆಲಸ ಮಾಡುವುದು ಬೆಂಗಳೂರಿನಲ್ಲಿ. ಎರಡು ದಿನ ರಜೆ ಸಿಕ್ಕರೆ ಊರ್ ಕಡೆ ಹೋಗುವುದು ನನ್ನ ರೂಡಿ. ಈ ಸಲ ಗಣೇಶಚತುರ್ಥಿ ರಜೆ ಬೇರೆ. ನನ್ ತರಾನೇ ನನ್ ಫ್ರೆಂಡ್ಸ್ ಕೂಡ ಊರಲ್ಲಿ ಇದ್ದರು . ಈ ಆಧುನಿಕ ಜೀವನದಿಂದ ಬೇಸತ್ತಿರುವ ನಮಗೆ ಎಲ್ಲಾದರೂ ಹೋಗೋಣ ಎಂಬ ಯೋಚನೆ ಬಂತು. ಗೋಕರ್ಣ… ನನ್ನೂರಿನಿಂದ 32.1 KM ದೂರ. ಬೆಳ್ಳಂಬೆಳಿಗ್ಗೆ ಬೈಕ್ ಹತ್ತಿ ಗೋಕರ್ಣದ ಕಡೆ ಹೊರಟೆವು. ದಾರಿ …