ಕರಿಕಾನಮ್ಮ ಬೆಟ್ಟ… ಈ ಪವಿತ್ರ ಸ್ಥಳ ಇರುವುದು ಈಗ ನಾನಿರುವ ಕುಮಟಾದಿಂದ ಕೇವಲ ಮೂವತ್ತು ಕಿಲೋಮೀಟರ್ ದೂರದಲ್ಲಿ. . ಆದರೆ ಹತ್ತಿರದಲ್ಲಿ ಹುಟ್ಟಿ ಬೆಳೆದಿರುವ ನನಗೆ ಈ ಸ್ಥಳದ ಮಹತ್ವ ತಿಳಿದದ್ದು ಅಲ್ಲಿ ಬೇಟಿ ನೀಡಿದಾಗ.
ಅದಕ್ಕೂ ಮೊದಲೇ ಸ್ಥಳದ ಮಹಿಮೆಯನ್ನು ಬೇರೆಯವರಿಂದ ಕೇಳಿ ತಿಳಿದಿದ್ದೆ ಅಷ್ಟೇ.
ಶನಿವಾರ ಬೆಳಿಗ್ಗೆ ಸ್ನೇಹಿತರ ಜೊತೆಗೂಡಿ ಪ್ರಯಾಣ ಆರಂಭಿಸಿದೆ ,ಆದರೆ ತುಂಬಾ ತಡವಾಗಿ .ನೀವೇನಾದರೂ ನಿಸರ್ಗ ಪ್ರಿಯರಾದರೆ ಪ್ರಕೃತಿ ಮಾತೆಯ ರಮಣೀಯ ಸೌಂದರ್ಯವನ್ನು ವೀಕ್ಷಿಸ ಬೇಕೆನ್ನುವ ಆಸೆ ನಿಮಗಿದ್ದರೆ ನಸುಕಿನ 6 ಗಂಟೆ ಸರಿಯಾದ ಸಮಯ . ಇಲ್ಲಿನ ಪ್ರಕೃತಿ ಸೌಂದರ್ಯದ ಬಗ್ಗೆ ನಂತರ ಹೇಳುತ್ತೇನೆ.
ಸರಿಸುಮಾರು9 ಗಂಟೆ ಹೊತ್ತಿಗೆ ನಮ್ಮ ಕಾರು ಬೆಟ್ಟದ ನ ಮೇಲೆ ಇತ್ತು. ಅಲ್ಲಿ ತಲುಪಿದ ನಾವು ಮೊದಲು ಭೇಟಿ ಕೊಟ್ಟಿದ್ದು ತಾಯಿ ಕರಿಕಾನ ಪರಮೇಶ್ವರಿ ದೇವಸ್ಥಾನಕ್ಕೆ .ಈ ದೇವಸ್ಥಾನ ಶ್ರೀಧರ ಸ್ವಾಮಿ ಅವರಿಂದ ಸ್ಥಾಪಿಸಲ್ಪಟ್ಟಿದೆ ಎಂದು ಕೇಳಿದ್ದೇನೆ. ಈ ದೇವಸ್ಥಾನದ ವಿಶೇಷತೆ ಏನೆಂದರೆ ದೇವಸ್ಥಾನದ ಗರ್ಭಗುಡಿಯು ಒಂದೇ ಶಿಲೆಯಿಂದ ಕೆತ್ತಲಾಗಿದೆ.
ದಿನನಿತ್ಯ ತಾಯಿಯ ದರ್ಶನಕ್ಕೆ ಅನೇಕಾನೇಕ ಭಕ್ತರು ಹತ್ತಿರದ ಊರುಗಳಿಂದಲ್ಲದೆ ದೂರದ ಬೆಂಗಳೂರಿನಂತಹ ಮಹಾನಗರ ಗಳಿಂದ ಬರುತ್ತಾರೆ. ದೇವಸ್ಥಾನದಲ್ಲಿ ನೀಡುವ ಅರಿಶಿನ ಪ್ರಸಾದ ಅನೇಕ ಚರ್ಮರೋಗಗಳನ್ನು ದೂರ ಮಾಡುವುದೆಂಬ ನಂಬಿಕೆ ಕೂಡ ಇದೆ .ತಾಯಿಯ ದರ್ಶನ ಪಡೆದ ನಮಗೆ ಮುಂದೆ ನೆನಪಿಗೆ ಬಂದಿದ್ದು ದೇವಸ್ಥಾನದ ಪ್ರದೇಶದಲ್ಲಿರುವ View point.
ಅಂತಹ ರಮಣೀಯವಾದ ಪ್ರಕೃತಿ ಸೌಂದರ್ಯವನ್ನು ಅಂದೇ ನಾನು ಕಂಡಿದ್ದು .
ದೂರದವರೆಗೆ ಕಣ್ಣಾಯಿಸಿದರೂ ಕಾಣುವ ಹಚ್ಚಹಸುರಿನ ಗಿರಿ ಕಾನನಗಳು, ಆ ಮಂಜು ಮುಸುಕಿದ ಪರ್ವತದ ತಪ್ಪಲಿನಲ್ಲಿ ನದಿ, ಇನ್ನೊಂದು ಕಡೆ ದೂರದಲ್ಲಿ ಕಣ್ಣು ಹಾಯಿಸಿದರೆ ಅರಬ್ಬಿ ಸಮುದ್ರ …..ಒಂದು ಕ್ಷಣ ಯಾರನ್ನಾದರೂ ಮೂಕವಿಸ್ಮಿತರನ್ನಾಗಿ ಮಾಡುತ್ತದೆ .
ಪ್ರಕೃತಿ ಸೌಂದರ್ಯದ ನಡುವೆ ನಮ್ಮನ್ನೇ ನಾವು ಮರೆತು ಮುಂದಿನ ಜನ್ಮವೊಂದಿದ್ದರೆ ಇಂತಹ ಮಲೆನಾಡಿನ ತಪ್ಪಲಿನಲ್ಲಿ ಹುಟ್ಟಬೇಕು ಎನ್ನುವ ಭಾವನೆ ಬರುವುದು ಸಹಜ ಬಿಡಿ.
ದೇವಸ್ಥಾನದ ಮೇಲ್ಗಡೆ ಬೆಟ್ಟದ ಒಳಗೆ ಸಣ್ಣ ಕಾಲ್ದಾರಿ ಇದೆ . ಟ್ರೆಕಿಂಗ್ ಪ್ರಿಯರಿಗೆ ಇದು ಹೇಳಿಮಾಡಿಸಿದಂತಿದೆ. ಸುಮಾರ್ ಒಂದು ಕಿಲೋಮೀಟರ್ ದೂರದಲ್ಲಿದೆ ಇನ್ನೊಂದು ದೇವಸ್ಥಾನವಿದೆ. ಇಲ್ಲಿ ಹೋಗಲು ಪ್ರಯತ್ನಿಸಿ ಮಳೆಯ ಕಾರಣದಿಂದ ಅರ್ಧದಲ್ಲಿ ಹಿಂದಿರುಗಬೇಕಾಯಿತು.
ಅಲ್ಲಿಗೆ ಅಂದಿನ ಸಂಚಾರ ಮುಗಿದು ಮನೆಯ ಕಡೆ ವಾಪಸ್ ಹೊರಟೆವು. ದಾರಿ ಮಧ್ಯೆ ದೇವಸ್ಥಾನಕ್ಕೆ ಬಂದ ಪ್ರಯಾಣಿಕರೊಬ್ಬರು ನಡೆದುಕೊಂಡು ಹೋಗುತ್ತಿರುವುದು ನಮ್ಮ ಗಮನಕ್ಕೆ ಬಂತು .ಅಲ್ಲಿ ಸಂಚಾರದ ಸೌಲಭ್ಯ ಸ್ವಲ್ಪ ಕಡಿಮೆ ಇರುವುದರಿಂದ ಅವರನ್ನು ನಮ್ಮ ಕಾರ್ ನಲ್ಲಿ ಹತ್ತಿಸಿಕೊಂಡು ಮುಂದುವರಿದೆವು.
ಆ ವ್ಯಕ್ತಿ ದೇವಸ್ಥಾನಕ್ಕೆ ಮದುವೆಯ ಕರೆಯೋಲೆ ಇಟ್ಟು ದೇವರ ದರ್ಶನ ಪಡೆಯಲು ಬಂದವರು. ನಮಗೂ ಕೂಡ ಕರೆಯೋಲೆಯನ್ನು ಕೊಟ್ಟು ದಯವಿಟ್ಟು ಬನ್ನಿರೆಂದು ಕರೆದರು . ಅವರ ಒಳ್ಳೆ ಮನಸ್ಸು ಕಂಡು ತುಂಬಾ ಖುಷಿ ಅನ್ನಿಸಿತು .ಅಪರಿಚಿತರಿಗೆ ಈ ತರ ವಿನಮ್ರತೆಯಿಂದ ವಿಶಾಲ ಹೃದಯದಿಂದ ಗೌರವಿಸುವರೇ ನಿಜವಾದ ಸಂಚಾರಿ ಮಿತ್ರರು.
ನಿಮ್ಮ ಸಂಚಾರಿ ಮಿತ್ರ…
Karikanamma hills is very beautiful places. My native place is near by karikanamma hills (kanakki)
Good to know your native place is Kanakki.Yes, KARIKANAMMA temple and hills are the awesome tourist destination.
About Kari kanamma temple travel experience article and visuals are really nice.There are many places in Uttara Kannada and Dakshina Kannada which are so beautiful and blessed by the beauty of rich nature.
Hope that Sanchaari mitra will cover most of the places in future and share the travel experience
Live To Travel 🙂
Thank you, Viraj Naik, Appreciate your response to our Article. Yeah,As You mentioned in your comment we will definitely try to cover all the tourist places of Uttarakannada that will helps to the nature lovers.