ನಂದಿ ಬೆಟ್ಟ ( Nandi Hills )

 ನನ್ನ ಜೀವನದಲ್ಲಿ ನಾನು ಅನೇಕಾನೇಕ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದೇನೆ.
ಆದರೆ  ನಂದಿ ಬೆಟ್ಟದ ಬಗ್ಗೆ ಇರುವ ಕುತೂಹಲ ಅದರ ಬಗ್ಗೆ ಕೇಳಿರುವ ವರ್ಣನೆ ಈ ನನ್ನ ಪ್ರವಾಸವನ್ನು ಸಾರ್ಥಕ ಎನಿಸಿದೆ.

ನೀವು ಬೆಂಗಳೂರಿನವರಾದರೆ ಇದು ನಿಮಗೆ ಸರ್ವೇ ಸಾಮಾನ್ಯ ಪ್ರವಾಸಿ ತಾಣದಲ್ಲೊಂದು ಅನಿಸಬಹುದು .ಆದರೆ ನನ್ನಂತ ದೂರದ ಎಲ್ಲಿಂದ ಲೋ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಮತ್ತು ನಂದಿ ಬೆಟ್ಟದ ವರ್ಣನೆಯನ್ನು ಓದಿ ಬೆಳೆದಿರುವವರಿಗೆ ಭೇಟಿ ನೀಡಿದಾಗ ಮೈ ರೋಮಾಂಚನ ಆಗುವುದು ನಿಜವಾಗಿಯೂ ಹೌದು.

ಅದೊಂದು ದಿನ ಯಾಕೋ ಗೊತ್ತಿಲ್ಲ ನನ್ನೊಬ್ಬ ಗೆಳೆಯ ನಂದಿ ಬೆಟ್ಟದ ಪ್ರವಾಸದ ಬಗ್ಗೆ ನನ್ನ ಹತ್ತಿರ ಮಾತನಾಡುತ್ತಿದ್ದೆ. ನಿಜವಾಗಿಯೂ ಅವನ ಮನಸ್ಸಿನಲ್ಲಿ ನಂದಿ ಬೆಟ್ಟಕ್ಕೆ ಹೋಗಬೇಕೆನ್ನುವ ಕುತೂಹಲ ಇತ್ತು ಇಲ್ಲವೋ ಗೊತ್ತಿಲ್ಲ.ಆದರೆ ಅವನು ನನ್ನ ಹತ್ತಿರ ಚರ್ಚಿಸಿದ್ದ ರಿಂದ ಯೋಜನೆ ಸಿದ್ಧವಾಯಿತು .
ಹಾಗೆ ತಡಮಾಡದೆ ಕಾರ್ ಕೂಡ ಸಿದ್ಧವಾಯಿತು. ಬೆಳಿಗ್ಗೆ ಐದು ಗಂಟೆಯ ಜಾವ ನಮ್ಮ ಕಾರು ದೇವನಹಳ್ಳಿ ಸಮೀಪ ಇತ್ತು. ಇದೇ ದೇವನಹಳ್ಳಿಯಲ್ಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಇರುವುದು.

ಆ ಕೊರೆಯುವ ಚಳಿಯಲ್ಲಿ ಸಹ ಹುಮ್ಮಸ್ಸು ನಮ್ಮಲ್ಲಿ .
ಬೆಟ್ಟದ ಬಗ್ಗೆ ವರ್ಣನೆಯನ್ನು ಮೊದಲೇ ಲೇಖನದಲ್ಲಿ ಓದಿದ್ದೆ. ಆದ್ದರಿಂದ ಯಾಕೋ ಮನಸ್ಸಿನಲ್ಲಿ ಇಲ್ಲಿಯ ಸ್ಥಳಗಳು ಅಲ್ಲಿಯ ಹಾವು ಹರಿದಂತೆ ಇರುವ ರೋಡ್ ಗಳು ಚಿರಪರಿಚಿತ ಅನಿಸುತ್ತಿದ್ದ ವು.

ಇಲ್ಲಿ ನಾನು ಏನು ಹೇಳ ಬಯಸುವುದೇನೆಂದರೆ ಇಂಥ ಪ್ರಕೃತಿಮಾತೆಯ ಸೌಂದರ್ಯವನ್ನು ನಮ್ಮ ಕಣ್ಮುಂದೆ ಬರುವಂತೆ ಮಾಡುವ ಲೇಖನ ಬರೆದವರು ನಿಜವಾಗಿಯೂ ಧನ್ಯರು. ಅದರಲ್ಲಿ ನನಗೆ ತುಂಬಾ ಇಷ್ಟವಾಗುವ ಲೇಖಕರೆಂದರೆ ಕೆ ಪಿ ಪೂರ್ಣಚಂದ್ರ ತೇಜಸ್ವಿ ಯವರು .ಇಂದಿನ ಆಧುನಿಕ ಜೀವನದಲ್ಲಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಕಥೆ ಕವಿತೆ ಲೇಖನ ರೂಪ ಇದೆಲ್ಲ ಒಂದು ಮಾಯ ಶಕ್ತಿ .ಇದಕ್ಕೆ ಸರಿ ಸಮಾನವಾದುದು ಯಾವುದು ಇಲ್ಲ .ಕಾಡಿನ ಕತೆಗಳು, ಅಡ್ವೆ೦ಚರ್, ಅಲೆಮಾರಿಯ ಅ೦ಡಮಾನ್ ಮತ್ತು ಮಹಾನದಿ ನೈಲ್ ಇವೆಲ್ಲಾ ನನಗೆ ಬಹಳ ಇಷ್ಟವಾದ ಪುಸ್ತಕ ಪುಸ್ತಕಗಳು.

ಕನ್ನಡದಲ್ಲಿ ಎಷ್ಟೋ ಮಹಾನ್ ಕವಿಗಳು ತಮ್ಮ ಬರಹದಿಂದ ಕನ್ನಡದ ಹಿರಿಮೆ ಗರಿಮೆಯನ್ನು ಹೆಚ್ಚಿಸಿದ್ದಾರೆ ಅಂತವರಿಗೆಲ್ಲ ನನ್ನ ಕೋಟಿ ಕೋಟಿ ನಮನ .

ನಂದಿ ಬೆಟ್ಟದ ಸೌಂದರ್ಯವನ್ನು ಇಲ್ಲಿನ ವಿಡಿಯೋದಲ್ಲಿ ನೀವೇ ನೋಡಬಹುದು. ಇಲ್ಲಿನ ಸಣ್ಣ ಸಣ್ಣ ಮಚಾನು ಗಳು, ಸುತ್ತಮುತ್ತಲ ಮರಗಿಡಗಳು ,ಟಿಪ್ಪು ಡ್ರಾಪ್ ಬೆಟ್ಟದ ಮೇಲಿರುವ ದೇವಸ್ಥಾನ ಇವೆಲ್ಲವೂ ಪ್ರವಾಸಿಗರ ಮನಸ್ಸಿಗೆ ಮನಸ್ಸಿಗೆ ಮುದ ನೀಡುವುದರಲ್ಲಿ ಸಂದೇಹವೇ ಇಲ್ಲ.

ನಿಮ್ಮ ಸಂಚಾರಿ ಮಿತ್ರ…

 

Click Here for more Pics : ನಂದಿ ಬೆಟ್ಟ ( Nandi Hills ) Photo Gallery.

Leave a Reply

Your email address will not be published.